ಏನಾಗಲಿ ಮುಂದೆ ಸಾಗು ನೀ

ಸೋನು ನಿಗಮ್
ವಿ. ಶ್ರೀಧರ್
ವಿ. ಶ್ರೀಧರ್

ಏನಾಗಲಿ ಮುಂದೆ ಸಾಗು ನೀ

ಬಯಸಿದ್ದೆಲ್ಲ ಸಿಗದು ಬಾಳಲಿ, ಓ..

ನನ್ನಾಣೆ ನನ್ನ ಮಾತು ಸುಳ್ಳಲ್ಲ, ಓ.. | ೨ | || ಪ ||

ಚಲಿಸುವ ಕಾಲವು ಕಲಿಸುವ ಪಾಠವ,

ಮರೆಯಬೇಡ ನೀ ತುಂಬಿಕೋ ಮನದಲಿ | ೨ |

ಇಂದಿಗೊ ನಾಳೆಗೊ ಮುಂದಿನ ಬಾಳಲಿ,

ಗೆಲ್ಲುವಂತ ಸ್ಪೂರ್ತಿ ದಾರಿದೀಪ ನಿನಗೆ ಆ ಅನುಭವ | ೨ |

ಕರುಣೆಗೆ ಬೆಲೆಯಿದೆ ಪುಣ್ಯಕೆ ಫಲವಿದೆ,

ದಯವ ತೋರುವ ಮಣ್ಣಿನ ಗುಣವಿದೆ

ಸಾವಿನ ಸುಳಿಯಲಿ ಸಿಲುಕಿದ ಜೀವಕೆ,

ಜೀವ ನೀಡುವ ಹೃದಯವೇ ದೈವವು

ಹರಸಿದ ಕೈಗಳು ನಮ್ಮನು ಬೆಳೆಸುತ,

ವಿಧಿಯ ಬರಹವಾಗಿ ಮೌನದಲ್ಲೆ ನಮ್ಮನು ಕಾಯುತ

ಪ್ರತಿಫಲ ಬಯಸದೆ ತೋರಿದ ಕರುಣೆಯು

ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದೀ ತರುವುದು

ಏನಾಗಲಿ ಮುಂದೆ ಸಾಗು ನೀ

ಪ್ರೀತಿಗಾಗೆ ಬದುಕು ಬಾಳಲಿ, ಓ..

ನನ್ನಾಣೆ ಪ್ರೀತಿ ಎಂದು ಸುಳ್ಳಲ್ಲ ಓ.. | ೨ |

ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಪರಿಕರಗಳು

ಸಾಲದ ಮಾಸಿಕ ಕಂತು (EMI)

ಸಾಲದ ಮಾಸಿಕ ಕಂತು (EMI) ಎಂದರೆ ಹಣಕಾಸು ಸಂಸ್ಥೆಯೊಂದರಿಂದ ಸಾಲ ತೆಗೆದುಕೊಂಡಾಗ, ಪ್ರತಿ ಮಾಸ ಅಥವಾ ಪ್ರತಿಕಾಲದಲ್ಲಿ ಪಾವತಿಸಬೇಕಾದ ನಿಗದಿತ ಮೊತ್ತ. ಮಾಸಿಕ ಕಂತನ್ನು ಆನ್‌ಲೈನ್‌ನಲ್ಲಿ ಲೆಕ್ಕಾಚಾರ ಮಾಡಿ.

ಹೆಸರು ಹುಡುಕಿ

ಲಿಂಗ, ಪ್ರಕಾರ, ವರ್ಗ, ಜನಪ್ರಿಯತೆಯ ಆಧಾರದ ಮೇಲೆ ಹೆಸರುಗಳನ್ನು ಹುಡುಕಿ. ಸಮಾನಾರ್ಥಕ ಹೆಸರುಗಳನ್ನು ಹುಡುಕಿ.

ಕರ್ನಾಟಕ ರಾಜ್ಯ

ಕರ್ನಾಟಕದ ಈ ನಕ್ಷೆಯಲ್ಲಿ ನೀವು ಪ್ರತಿ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ, ಆ ಜಿಲ್ಲೆಯ ವಿವರಗಳು – ಹವಾಮಾನ, ಜನಸಂಖ್ಯೆ, ಪ್ರಮುಖ ನಗರಗಳು, ಆರ್ಥಿಕ ಚಟುವಟಿಕೆಗಳು ಮತ್ತು ಇತರೆ ಮಾಹಿತಿಗಳನ್ನು ಈ ಪುಟದ ಕೆಳಭಾಗದಲ್ಲಿ ಅಥವಾ ಬಲ ಭಾಗದಲ್ಲಿ ನೋಡಬಹುದಾಗಿದೆ. ಪುಟವನ್ನು ಅನ್ವೇಷಿಸಿ ಮತ್ತು ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಿ!